ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ
  • ಮುಖಪುಟ
  • ಸೇವಾ ನೋಂದಣಿ
  • ಸೌಲಭ್ಯಗಳು
  • ದೇವಸ್ಥಾನದ ಬಗ್ಗೆ
  • ಮಾಹಿತಿ
  • ಸಂಪರ್ಕಿಸಿ
  • ಇ-ಹುಂಡಿ
  • More
    • ಮುಖಪುಟ
    • ಸೇವಾ ನೋಂದಣಿ
    • ಸೌಲಭ್ಯಗಳು
    • ದೇವಸ್ಥಾನದ ಬಗ್ಗೆ
    • ಮಾಹಿತಿ
    • ಸಂಪರ್ಕಿಸಿ
    • ಇ-ಹುಂಡಿ
ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ
  • ಮುಖಪುಟ
  • ಸೇವಾ ನೋಂದಣಿ
  • ಸೌಲಭ್ಯಗಳು
  • ದೇವಸ್ಥಾನದ ಬಗ್ಗೆ
  • ಮಾಹಿತಿ
  • ಸಂಪರ್ಕಿಸಿ
  • ಇ-ಹುಂಡಿ

ದೇವಸ್ಥಾನದ ಹಳೆಯ ಚಿತ್ರಣ

ನಮೋಸ್ತು ಶೇಷ ರೂಪಾಯ ಸರ್ಪರೂಪ ನಮೋಸ್ತುತೇ|  
ಸರ್ವ ಪಾಪ ಹರೇ ದೇವ ನಾಗಸುಬ್ರಹ್ಮಣ್ಯಾಯತೇ ನಮಃ ||

    ದೇವಸ್ಥಾನದ ಇತಿಹಾಸ

    ಶಿವಮೊಗ್ಗ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸ

         ಶಿವಮೊಗ್ಗ ನಗರದ ಗಾಡಿಕೊಪ್ಪ ಗ್ರಾಮದಲ್ಲಿ ಇರುವಂತಹ ಶ್ರೀ ನಾಗಸುಬ್ರಮಣ್ಯ ದೇವಸ್ಥಾನದ ಪೂರ್ವ ಹಿನ್ನಲೆಗೆ 80 ರಿಂದ 100 ವರ್ಷದ ಇತಿಹಾಸವಿದೆ. 

    ಇದೊಂದು ಗದ್ದೆಯ ಜಾಗವಾಗಿದ್ದ,  ಸುತ್ತಮುತ್ತಲ ಗದ್ದೆಗಳನ್ನ ಈ ದೇವಸ್ಥಾನದ ಮೂಲ ದೇವರಾಗಿರುವ ನಾಗನು ಕಾಪಾಡುತ್ತಿದ್ದ ಎಂಬ ಇತಿಹಾಸವಿದೆ. 

    ಇತ್ತೀಚಿನ ದಿನಗಳಲ್ಲಿ 80 ವರ್ಷಕ್ಕೆ ಮೇಲ್ಪಟ್ಟಂತವರು ಹೇಳಿದಂತಹ ಇತಿಹಾಸದ ಪುರಾವೆಯನ್ನು ಇಟ್ಟುಕೊಂಡು ಇದೊಂದು ಐತಿಹಾಸಿಕ ಹುತ್ತದಿಂದ ಮತ್ತು ನಾಗನ ವಿಗ್ರಹದೊಂದಿಗೆ ಇರುವಂತಹ ದೇವಸ್ಥಾನವಾಗಿತ್ತು. 

    ಇದು ಕಾಲ ಕಳೆದಂತೆ ಶಿವಮೊಗ್ಗ ನಗರಕ್ಕೆ ವ್ಯಾಪಿಸಿ ಇದನ್ನ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಈ ಜಾಗವನ್ನ ಬಡಾವಣೆ ಮಾಡುವುದಾಗಿ ಘೋಷಿಸಿತು. ಅಂತಹ ಸಂದರ್ಭದಲ್ಲಿ ಶಿವಮೊಗ್ಗ ನಗರದ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯ ಹಲವಾರು ಹಿರಿಯ ಪ್ರಮುಖರೆಲ್ಲರೂ ಸೇರಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಹತ್ತಿರ ಹೋಗಿ ಕೇಳಿಕೊಂಡು ಈ ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡುತ್ತೇವೆ ಎಂಬುದಾಗಿ ಹೇಳಿ ಈ ಜಾಗವನ್ನ ಸ್ವಾಮಿ ವಿವೇಕಾನಂದ ಅಡ್ವೆಂಚರ್ಸ್ ಅಂಡ್ ಸ್ಪೋಟ್ಸ್ ಕ್ಲಬ್ ಗೆ ಹಸ್ತಾಂತರಿಸಿದರು. ಅದು ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಎಂಬ ಉಪ ಸಮಿತಿ ರಚಿಸಿ ಅದರ ಅನ್ವಯ ದೇವಸ್ಥಾನ ನಿರ್ವಹಿಸುತ್ತಿದೆ..

    2005 ರಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳು  

    ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ, ಇವರ ಅಮೃತ ಹಸ್ತದಿಂದ ಪುಷ್ಪಾರ್ಚನೆಯ ಮುಖಾಂತರವಾಗಿ ದೇವಸ್ಥಾನದ ಜೀರ್ಣೋದ್ಧಾರವು ಪ್ರಾರಂಭವಾಯಿತು. 

    2005 ರಲ್ಲಿ ಪ್ರಾರಂಭವಾದ ಇದರ ಜೀರ್ಣೋದ್ಧಾರವು 1-5-2009 ಮೇ ತಿಂಗಳಲ್ಲಿ ಶ್ರೀ ನಾಗಸುಬ್ರಮಣ್ಯ ಸ್ವಾಮಿಯ ಮೂರ್ತಿಯ ಪ್ರತಿಷ್ಠಾಪನೆ, ಬ್ರಹ್ಮಕುಂಭಾಭಿಷೇಕವು

    ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಕೂಡಲಿ ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು. ಈ ದೇವಾಲಯಕ್ಕೆ ಅತ್ಯಂತ ಹೆಚ್ಚಿನ ಭಕ್ತಾದಿಗಳಾಗಿದ್ದು, ಸುತ್ತಮುತ್ತ ಇರುವಂತಹ ಎಲ್ಲಾ ಗ್ರಾಮದ ಜನರು ತಮ್ಮ ಮನೆಯ ವಿಶೇಷ ಕಾರ್ಯಕ್ರಮಗಳಲ್ಲಿ ದೇವಸ್ಥಾನಕ್ಕೆ ಬಂದು ಹಣ್ಣು -ಕಾಯಿಯನ್ನ ಮಾಡಿಸಿಕೊಂಡು ದೇವರ ತೀರ್ಥ ಪ್ರಸಾದವನ್ನ ಸ್ವೀಕರಿಸಿ ಮನೆಗೆ ಹಾಕುವಂತಹ ಪದ್ಧತಿ ಈಗಲೂ ಕೂಡ ಇದೆ. 

    ದೇವಸ್ಥಾನದ ಸುತ್ತ ಇರುವಂತಹ ಎಲ್ಲಾ ಜಾಗವನ್ನ ನಾಗನ  ನಡೆ ಎಂಬುದಾಗಿ ಪ್ರತೀತಿ ಇದ್ದು ಹಾಗಾಗಿ ದೇವಸ್ಥಾನಕ್ಕೆ ನಡೆದುಕೊಳ್ಳುವಂತಹ ಜನರು ಅತಿ ಹೆಚ್ಚಿದ್ದಾರೆ. ಹಾಗೆಯೇ ಅಂದಿನಿಂದ ಇಂದಿನವರೆಗೂ ನಿತ್ಯವೂ ತ್ರಿಕಾಲ ಪೂಜೆಯನ್ನು ಮಾಡುತ್ತಾ ಹಾಗೆಯೇ ಮಾಸ ಮಾಸಗಳಲ್ಲೂ ಕೂಡ ವಿಶೇಷವಾದಂತಹ ಧಾರ್ಮಿಕ ಚಟುವಟಿಕೆಗಳನ್ನು ನಡೆದುಕೊಂಡು ಬರುವಂತಹ ಪದ್ಧತಿ ಇದೆ. 



    ಅಂತೆಯೇ ಈ ದೇವಸ್ಥಾನದ  ಹಾಗೂ ಶಿವಮೊಗ್ಗ ನಗರದ ಇತಿಹಾಸದಲ್ಲೇ ಮೂರು ಬಾರಿ ನಾಗಬ್ರಹ್ಮ ಮಂಡಲೋತ್ಸವ ನಡೆದಿರುವುದು ಅತ್ಯಂತ ವಿಶೇಷವಾಗಿರುವುದು. ಅದಲ್ಲದೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿರುವಂತಹ ಕುಕ್ಕೆ ಸುಬ್ರಹ್ಮಣ್ಯದ ರೀತಿಯಲ್ಲಿಯೇ ಈ ದೇವಸ್ಥಾನವು ಇದ್ದು ಇದು ವಲ್ಮೀಕ ಹುತ್ತದಿಂದ ನಾಗನ ಹೆಡೆಯೊಳಗೆ ಸುಬ್ರಹ್ಮಣ್ಯನೊಂದಿಗೆ ಈ ದೇವಸ್ಥಾನವು ಇದ್ದು ದೇವರು ಸರ್ವ ಭಕ್ತರನ್ನು ಆಕರ್ಷಿಸಿ ಅನುಗ್ರಹಿಸುತ್ತಿರುವುದು ವಿಶೇಷ.

    ನಮೋಸ್ತುತೇ ನಾಗ ವಿಶಾಲ ಭೋಗ

    ತ್ರೈಲೋಕ್ಯ ಕಲ್ಯಾಣ ಗುಣೈಕ ರೂಪ 

    ಪ್ರಸಿದ್ಧ ಶೇಷಾಹಿ ಸಮಾನ ತೇಜಾಃ

    ವಲ್ಮೀಕ ದೇವಾಲಯ ಸನ್ನಿಧಾನ |

    ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಶಿವಮೊಗ್ಗ

    ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ, "ಶ್ರೀ ನಾಗಕ್ಷೇತ್ರ" ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಜಿಲ್ಲೆ ಕರ್ನಾಟಕ ರಾಜ್ಯ. ಪಿನ್ಕೋಡ್ -577205

    ಸಂದೇಶ್ ಉಪಾದ್ಯ,'ಪ್ರಧಾನ ಅರ್ಚಕರು' ಮೊಬೈಲ್: 9964597654

    Copyright © 2026 Shrinagasubrahmanya Temple Shivamogga - All Rights Reserved.

    Designed by: XITISHAI Technologies PVT LTD

    This website uses cookies.

    We use cookies to analyze website traffic and optimize your website experience. By accepting our use of cookies, your data will be aggregated with all other user data.

    Accept